ನಿರ್ವಾಹಕ ಗುಣಕ -
	ವ್ಯವಸ್ಥೆಯ ಪರಿಣಾಮಕಾರಿತ್ವವನ್ನು ಅಳೆಯುವ ನಿಷ್ಪತ್ತಿ (ಕೋಎಫಿಶೆಂಟ್ ಆಫ್ ಪರ್ಫಾಮೆನ್ಸ್). ಕಾರ್ಯ ಅಥವಾ ಉಪಯುಕ್ತ ನಿರ್ಗಮವನ್ನು (ಯೂಸ್‍ಫುಲ್ ಔಟ್‍ಪುಟ್) ಉತ್ಪಾದಿಸಲು ಬೇಕಾಗುವ ಉಷ್ಣಶಕ್ತಿಯಿಂದ ಆ ನಿರ್ಗಮವನ್ನು ಭಾಗಿಸಿದಾಗ ದೊರೆಯುವ ಲಬ್ದಕ್ಕೆ ಉಷ್ಣ ವಿಜ್ಞಾನದಲ್ಲಿ ದಕ್ಷತೆ ಎನ್ನುವರು. ಉದಾಹರಣೆಗೆ ಶೀತಕರಣ ವ್ಯವಸ್ಥೆಯೊಂದರಲ್ಲಿ (ರೆಫ್ರಿಜರೇಶನ್ ಸಿಸ್ಟಮ್) ಶೀತಕರಣೋಷ್ಣತೆಯಲ್ಲಿ ಹೀರಲ್ಪಟ್ಟ ಉಷ್ಣವೇ ಉಪಯುಕ್ತ ನಿರ್ಗಮ. ಆ ಶೀತಲೀಕರಣವನ್ನು ಉತ್ಪಾದಿಸಲು ಮಾಡುವ ಕಾರ್ಯ ನಿವೇಶ (ಇನ್‍ಪುಟ್) ಸೂಕ್ತ ಏಕಮಾನಗಳಲ್ಲಿ ಪಡೆದ ಇವೆರಡರ ನಿಷ್ಪತ್ತಿಯೇ ನಿರ್ವಾಹಕ ಗುಣಕ.
(ಎಂ.ಸಿ.ಜಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ